About Dishadarshi

We are a team of professionals with considerable years of experience in different fields, who are at present working in different segments of the society, wanting to extend our helping hand to the needy which is our passion too.

This team is also highly influenced, inspired and blessed by H.H Shrimadjagadguru Shankaracharya Shri Shri Raghveshwara Bharathi Swamijee of Shree Samsthana Gokarna, Ramachandrapura.

Under the divine guidance of shree samsthana this team want to contribute their might to the Ocean front, as "A Bindu to the Sindhu".

Today's youth though having cultured middle class backgrounds with good academic records fail to get suitably employed, made us to think and the studies made on that revealed lack of skills in them for today's world.

Based on this we have embarked on a 3D program of "Personality, Skill and Attitude" orientation plan. Through training workshops, personal counseling, employment selection guidance, support during early days of employment, for change and adapting to new environment without loosing identity and roots..are envisaged.


|| ಹರೇರಾಮ ||
ದಿಶಾದರ್ಶಿಗೆ “ನಾನೂರರ” ಸಂಭ್ರಮ....!

ದಿಶಾದರ್ಶಿ ಬೆಳೆದು ಬಂದ ದಾರಿ ...

ಯಾವಾಗಲೂ ಸಮಾಜಮುಖಿ ಕಾರ್ಯಗಳನ್ನೆ ಮಾಡುತ್ತಾ ಸಮಾಜದ ಒಳಿತನ್ನೆ ಬಯಸುವ ನಮ್ಮ ನೆಚ್ಚಿನ ಶ್ರೀ ಸಂಸ್ಥಾನದವರ ಬಳಿ ಉದ್ಯೋಗಾಕಾಂಕ್ಷಿಗಲಾಗಿ ಬರುವ ಶಿಷ್ಯರಿಗಾಗಿ ಸಂಸ್ಥಾನದವರು ಚಾತ್ರ ಚಾತುರ್ಮಾಸ್ಯ(2015)ದಂದು ಅಶೀರ್ವದಿಸಿದ ಯೋಜನೆಯೇ “ದಿಶಾದರ್ಶಿ” .

ಶ್ರೀ ಬಾಲಸುಬ್ರಮಣ್ಯ ಭಟ್ (ಬಾಲಣ್ಣ) ಅವರ ನೇತೃತ್ವದಲ್ಲಿ “ದಿಶಾದರ್ಶಿ” ಯ ಕಾರ್ಯಕ್ರಮಗಳ ಮುಂದಿನ ಯೋಜನೆಗಳ ರೂಪುರೇಷೆ ಸಿದ್ದಗೊಂಡಿತು.

“ ರಿಷಿ ಸಿಸ್ಟಮ್ಸ್” ಮಾಲಿಕರಾದ ಶ್ರಿ ಸತ್ಯಶಂಕರ್ ಮರಕಿಣಿ ಹಾಗೂ ಕುಮಾರಿ ಚೈತ್ರ ಅವರಿಂದ ದಿಶಾದರ್ಶಿಗಾಗಿಯೇ ಒಂದು ಜಾಲತಾಣದ ಕೊಂಡಿಯೂ ಆರಂಭಗೊಂಡಿತು. ಮುಂಬೈನ ಖ್ಯಾತ ಉದ್ಯಮಿಗಳೂ, ಶ್ರೀಮಠದ ಪರಮ ಶಿಷ್ಯರೂ ಆದ ಶ್ರೀ ಪ್ರಕಾಶ್ ಭಟ್ ಅವರು ಒಂದು ವರುಷದ ಖರ್ಚಿನ ಜವಬ್ದಾರಿಯನ್ನು ವಹಿಸಿಕೊಂಡರು.

ಇದರ ಜೊತೆಯಲ್ಲಿ , ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ವಾರಾಂತ್ಯಗಳಲ್ಲಿ ಮನ:ಪೂರ್ವಕವಾಗಿ ಇದಕ್ಕಾಗಿ ಕೆಲಸ ಮಾಡುವ ತಂಡವೂ ಸಿದ್ದವಾಯಿತು.
ಹೀಗೆ ಉದ್ಯೋಗಾಕಾಂಕ್ಷಿಗಳಿಗೆ ಎಲ್ಲಾ ರೀತಿಯಲ್ಲಿ (ರೆಸುಮೆ ಬರೆಯುವುದು,ಸಂದರ್ಶನ ಎದುರಿಸುವುದು, ಪರೀಕ್ಷೆ ಎದುರಿಸುವುದು, ಸಂವಹನ ಕಲೆ, ಉದ್ಯೋಗ ಮಾಹಿತಿ ಮತ್ತು ಸಲಹೆ ..) ಸಹಾಯ ಒದಗಿಸುವ ದೂರದೃಷ್ಠಿ ಹೊಂದಿಕೊಂಡು ಆರಂಭವಾದ ದಿಶಾದರ್ಶಿ ಶ್ರೀ ಗುರುಗಳ ಆಶೀರ್ವಾದದಿಂದ ಇಂದು 440ಕ್ಕೂ ಹೆಚ್ಚು ಉದ್ಯೋಗ ಕೊಡಿಸುವಲ್ಲಿ ಹಾಗೂ ಇತರ ಸಹಾಯಗಳನ್ನು ಮಾಡುವಲ್ಲಿ ಸಫಲತೆಯನ್ನು ಕಂಡಿದೆ.

ದಿಶಾದರ್ಶಿ ಹೆಜ್ಜೆಗುರುತು :

ಲೋಕಾರ್ಪಣೆ : ಸೆಪ್ಟೆಂಬರ್ 27,2015
ಮೊದಲ ಉದ್ಯೋಗ ಪ್ರಾಪ್ತಿ : ಸೆಪ್ಟೆಂಬರ್ 27,2015
100ನೇ ಉದ್ಯೋಗ ಪ್ರಾಪ್ತಿ : ಡಿಸೆಂಬರ್ 22,2016
200ನೇ ಉದ್ಯೋಗ ಪ್ರಾಪ್ತಿ : ಒಕ್ಟೋಬರ್ 19, 2017
ವಿಜಯೀಭವ – 200ರ ಸಂಭ್ರಮ – ಶ್ರೀ ಗುರುಗಳಿಂದ ವಿಶೇಷ ಅನುಗ್ರಹ ಮಂತ್ರಾಕ್ಷತೆ – ನವೆಂಬರ್ 12,2017
300ನೇ ಉದ್ಯೋಗ ಪ್ರಾಪ್ತಿ : ಆಗಸ್ಟ್ 25, 2018
400ನೇ ಉದ್ಯೋಗ ಪ್ರಾಪ್ತಿ : ಮೇ 22, 2019

ದಿಶಾದರ್ಶಿ ಕೇಂದ್ರ ತಂಡ :

ಶ್ರೀ ಬಾಲಸುಬ್ರಮಣ್ಯ ಭಟ್(ಮಹಾಮಂಡಲ ಪ್ರಧಾನರು, ಜೀವಿಕಾ ವಿಭಾಗ), ಶ್ರೀ ಸತ್ಯಶಂಕರ ಪೂಕಳ(ಬೆಂಗಳೂರು ದಕ್ಷಿಣ ಮಂಡಲ ಪ್ರಧಾನರು, ಜೀವಿಕಾ ವಿಭಾಗ), ಶ್ರೀ ಮುರಳಿ ಕುಕ್ಕುಪುಣಿ (ಬೆಂಗಳೂರು ಉತ್ತರ ಮಂಡಲ ಪ್ರಧಾನರು, ಜೀವಿಕಾ ವಿಭಾಗ), ಶ್ರೀ ಸ್ಕಂದ ಪದ್ಯಾಣ, ಶ್ರೀ ವೆಂಕಟ ಶ್ರೇಯಸ್, ಶ್ರೀ ವಿನಾಯಕ ಬಿ.ಸಿ, ಶ್ರೀಮತಿ ಕೀರ್ತನ ಸೊಂದಿ ಹಾಗೂ ಕುಮಾರಿ ಅರ್ಪಿತಾ.

ದಿಶಾದರ್ಶಿ ಆಡಳಿತಾತ್ಮಕ ತಂಡ ಹಾಗು ಆರಂಭದ ದಿನಗಳಲ್ಲಿ ತಂಡಕ್ಕೆ ಭಲ ನೀಡಿದವರಲ್ಲಿ ಇವರು ಪ್ರಮುಖರು:

ಶ್ರೀ ವೈ.ವಿ.ಕೃಷ್ಣಮೂರ್ತಿ,ಶ್ರೀಮತಿ ಈಶ್ವರಿ ಬೇರ್ಕಡವು, ಶ್ರೀ ಹರಿಪ್ರಸಾದ್ ಪೆರಿಯಪ್ಪು, ಶ್ರೀ ಸತ್ಯಶಂಕರ ಮರಕ್ಕಿಣಿ, ಕುಮಾರಿ ಚೈತ್ರ , ಶ್ರೀ ಪ್ರಸನ್ನ ಮಾವಿನಕುಳಿ, ಶ್ರೀ ಆನಂದ ಸುಬ್ರಮಣ್ಯ, ಶ್ರೀಮತಿ ಅರುಣಾ ಅಜಯ್, ಕುಮಾರಿ ಸೌಮ್ಯ, ಶ್ರೀಮತಿ ರಮ್ಯ ಸುರೇಶ್, ಕುಮಾರಿ ಚೈತ್ರಿಕ, ಶ್ರೀ ಆದಿತ್ಯ ಹೆಗಡೆ, ಶ್ರೀ ಸುಬ್ರಮಣ್ಯ, ಶ್ರೀ ಜಯಗಣೇಶ ಹಾಗು ಶ್ರೀ ಕೃಷ್ಣ ಕುಮಾರ.

ಬೆಂಗಳೂರು ಹೊರತಾದ ದಿಶಾದರ್ಶಿ ಕಾರ್ಯಾಗಾರಗಳ ಆಯೋಜನೆಗಳಲ್ಲಿ ಉಪ್ಪಿನಂಗಡಿ ಮಂಡಲ ಜೀವಿಕಾ ಪ್ರಧಾನರಾದ ಶ್ರೀ ಉದಯಶಂಕರ ಅರಸಿನಮಕ್ಕಿ ಹಾಗೂ ಹೊನ್ನಾವರ ಮಂಡಲ ಜೀವಿಕಾ ಪ್ರಧಾನರಾದ ಶ್ರೀ ವಿಷ್ಣುಮೂರ್ತಿ ಭಟ್ ಅವರು ಪ್ರಧಾನ ಪಾತ್ರ ವಹಿಸಿದ್ದಾರೆ.

ದಿಶಾದರ್ಶಿ ಕಾರ್ಯ ವೈಖರಿ :

ತಮ್ಮ ವಿದ್ಯಾರ್ಥಿ ದೆಸೆಯನ್ನು ಮುಗಿಸಿ ಉದ್ಯೋಗ ಹುಡುಕಾಟ ಆರಂಭಿಸುವ ನಮ್ಮ ಸಮಾಜದ ವಿದ್ಯಾರ್ಥಿಗಳು ಆರಂಭದಲ್ಲಿ ದಿಶಾದರ್ಶಿಯ ಜಾಲತಾಣದ ಕೊಂಡಿಯಲ್ಲಿ ನೊಂದಣಿ ಮಾಡಬೇಕು. ನಂತರ ದಿಶಾದರ್ಶಿ ತಂಡ ಅದರಲ್ಲಿ ನಮೂದಿಸಿದ ಗುರಿಕ್ಕಾರರನ್ನು ಸಂಪರ್ಕಿಸಿ ಆಕಾಂಕ್ಷಿಯ ಹಿನ್ನಲೆಯನ್ನು ತಿಳಿಯುತ್ತದೆ. ಗುರಿಕ್ಕಾರರ ಮಾಹಿತಿಯನ್ನನುಸರಿಸಿ ಆಕಾಂಕ್ಷಿಯನ್ನು ಅನುಮೋದಿಸಲಾಗುತ್ತದೆ. ಹೀಗೆ ಅನುಮೋದಿಸಿದ ಆಕಾಂಕ್ಷಿಗಳನ್ನು ಉದ್ಯೋಗ ಮಾಹಿತಿ ಕೊಡುವ ವಾಟ್ಸಾಪ್ ಗ್ರೂಪ್ಗೆ ಸೇರಿಸಲಾಗುತ್ತದೆ. ನಂತರ ಎಲ್ಲ ಉದ್ಯೋಗ ಮಾಹಿತಿಗಳೂ ಅವರ ಸಂಚಾರಿ ದೂರವಾಣಿಯ ಮೂಲಕ ಅವರಿಗೆ ತಲುಪುತ್ತದೆ. ಇದರ ಜೊತೆಗೆ, ಅವರ ರೆಸ್ಯೂಮನ್ನು ಪರಿಶೀಲಿಸಿ (ಅಗತ್ಯ ಇದ್ದಲ್ಲಿ) ಎನಾದರು ಬದಲಾವಣೆಗಳು ಬೇಕಾದರೆ ಮಾಹಿತಿ ಒದಗಿಸಲಾಗುತ್ತದೆ ಹಾಗು ಸಂದರ್ಶನ ಎದುರಿಸುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಯಾರಿಗಾದರೂ ಆಪ್ತ ಸಮಾಲೋಚನೆ( ಕೌನ್ಸೆಲ್ಲಿಂಗ್)ನ ಅವಶ್ಯಕತೆ ಇದ್ದಲ್ಲಿ ಅದನ್ನೂ ಮುಖತ: ಅಥವಾ ದೂರವಾಣಿ ಮೂಲಕ ನಡೆಸಲಾಗುವುದು. ಈ ಎಲ್ಲ ಕೆಲಸಗಳು ಇಂದಿನವರೆಗೂ ನಿರಂತರವಾಗಿ ನಡೆಯುತ್ತಿದೆ.

ಇದೀಗ ತಂತ್ರಾಂಶವನ್ನು ಆವಶ್ಯಕತೆ ಅನುಸಾರ ಮೇಲ್ದರ್ಜೆಗೆ ಏರಿಸಲಾಗಿದೆ. ಈಗ ರಿಷಿ ಸಿಸ್ಟಮ್ ಕಂಪೆನಿಯು ಅಟೋ SMS - ಗುರಿಕ್ಕಾರರಿಗೆ ತಲುಪುವಂತೆ ಮಾಡಿ ಅನುಮೋದನಾ ವ್ಯವಸ್ಥೆಯ ಹಂತಗಳನ್ನು ಕಡಿಮೆಗೊಳಿಸಿದ್ದಾರೆ.

ಮೊದಲು ಕೇವಲ ಫ಼್ರೆಶರ್ಸ್ಗಳಿಗೆ ಮಾತ್ರ ಕೊಡುತ್ತಿದ್ದ ಸಹಾಯ ಹಸ್ತವನ್ನು, ಈಗಾಗಲೇ ಉದ್ಯೋಗದಲ್ಲಿದ್ದು ಕೊಂಡು ಅದಕ್ಕಿಂತಲೂ ಉತ್ತಮ ಅಥವಾ ಬೇರೆ ಉದ್ಯೋಗ ಹುಡುಕುವವರಿಗೂ(ಎಕ್ಸ್ಪೀರಿಯನ್ಸ್ಡ್) ವಿಸ್ತರಿಸಲಾಗಿದೆ. ಹಾಗಾಗಿ ಈಗ ಒಟ್ಟು 6 ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಉದ್ಯೂಗ ಮಾಹಿತಿಯನ್ನು ನೀಡಲಾಗುತ್ತಿದೆ.
ಇವೆಲ್ಲದರ ಜೊತೆಗೆ ಹಲವಾರು ವ್ಯಕ್ತಿತ್ವ ವಿಕಸನ, ಸಂದರ್ಶನ, ರೆಸುಮೆ, ಉದ್ಯೋಗ ಮಾಹಿತಿ ಕಾರ್ಯಾಗಾರಗಳೂ ಸಂಪನ್ನಗೊಂಡಿದೆ.

ಉದ್ಯೋಗ ಮಾಹಿತಿಯ ಜೊತೆ ಜೊತೆಗೆ ದಿಶಾದರ್ಶಿಯ ಕೆಳಗೆ ಈವರೆಗೆ ನಡೆದ ಕಾರ್ಯಕ್ರಮಗಳು :
-500ಕ್ಕೂ ಹೆಚ್ಚು ರೆಸ್ಯೂಮೆ ತಿದ್ದುಪಡಿ
-500ಕ್ಕೂ ಹೆಚ್ಚು ಆಪ್ತ ಸಮಾಲೋಚನೆ
-12 ಕ್ಕೂ ಹೆಚ್ಚು ವ್ಯಕ್ತಿತ್ವ ವಿಕಸನ, ರೆಸುಮೆ, ಸಂದರ್ಶನ ಕಲೆ ಹಾಗು ಉದ್ಯೋಗ ಮಾಹಿತಿ ಕಾರ್ಯಾಗಾರಗಳು (ಸ್ಥಳ: ಬೆಂಗಳೂರು, ಪುತ್ತೂರು, ಉಜಿರೆ, ಮಂಗಳೂರು, ಹೊನ್ನಾವರ, ಸಾಗರ ಹಾಗು ಮಾಣಿ ಮಠ.)
-ಸಂಪನ್ಮೂಲ ವ್ಯಕ್ತಿಗಳಲ್ಲಿ ದಿಶಾದರ್ಶಿ ತಂಡ ಹಾಗು ಇತರ ಕ್ಷೇತ್ರಗಳ ಅನುಭವೀ ಖ್ಯಾತನಾಮರೂ ಒಳಗೊಂಡಿದ್ದಾರೆ.
-4 ತಾಂತ್ರಿಕ(ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಇತರ) ವಿಷಯಗಳ ಕಾರ್ಯಾಗಾರಗಳು.
-2 ಐಬಿಪಿಎಸ್ ಪರೀಕ್ಷೆ ಬರೆಯುವ ಕುರಿತು ತರಬೇತಿ.
-1 ಸೆಲ್ಪ್ ಅಪ್ರೈಸಲ್ ಬರೆಯುವ ಬಗ್ಗೆ ಕಾರ್ಯಾಗಾರ.
-4 ತಾಂತ್ರಿಕ ವಿದ್ಯಾಲಯಗಳಲ್ಲಿ ದಿಶಾದರ್ಶಯ ಮೂಲಕ “ಕ್ಯಾಂಪಸ್ ಇಂಟವ್ಯೂ” ನಡೆಸಲಾಗಿದೆ.

ದಿಶಾದರ್ಶಿಯ ಸಹಾಯ ಪಡೆದು ಉದ್ಯೋಗ ಪಡೆದವರ ಸಂಖ್ಯೆ 200 ತಲುಪಿದಾಗ, ಉದ್ಯೋಗ ಪಡೆದವರಿಗಾಗಿ ಶ್ರೀ ಗುರುಗಳಿಂದ ವಿಶೇಷ ಮಂತ್ರಾಕ್ಷತೆ ಕಾರ್ಯಕ್ರಮ “ವಿಜಯೀಭವ” (ನವಂಬರ್ 2017).
ಈ ದಿನ ಎರಡು ಖ್ಯಾತ ಅಭ್ಯಾಗತರಿಂದ ವಿಶೇಷ ಮಹಿತಿ ಕಾರ್ಯಾಗಾರಗಳು.
ಶ್ರೀ ಗುರುಗಳಿಂದ ದಿಶಾದರ್ಶಿಯ ಫಲಾನುಭವಿಗಳಿಗೆ ವಿಶೇಷ ಅನುಗ್ರಹ ಮಂತ್ರಾಕ್ಷತೆ ಹಾಗು ಅಶೀರ್ವಚನ.


ಅಂಕಿ-ಅಂಶ:
-ಉದ್ಯೋಗ ದೊರೆತವರ ಸಂಖ್

Support For Sure